ಕುಟುಂಬ ದಾಖಲಾತಿ

ಕುಟುಂಬ ದಾಖಲಾತಿ ಮಾಡುವ ಸೂಚನೆಗಳು.

1. ದಯವಿಟ್ಟು ಅರ್ಜಿ ಸಲ್ಲಿಸುವ ಮುನ್ನ ಎಲ್ಲ ಸೂಚನೆಗಳನ್ನು ಗಮನಿಸಿ. ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಬಳಿ ಎಲ್ಲ ಅವಶ್ಯಕ ದಾಖಲೆ / ವಿವರಗಳು ಲಭ್ಯ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಸರಿಯಾದ ಮಾಹಿತಿಯನ್ನು ಮಾತ್ರ ನೀಡುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

2. ಅರ್ಜಿ ಸಲ್ಲಿಸಲು ಅರ್ಹತೆಗಳು :

      a. ಕರ್ನಾಟಕ ರಾಜ್ಯದ ನಿವಾಸಿ ನಾಗರಿಕರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

      b. ನೀವು ಈಗಾಗಲೇ ಪಡಿತರ ಚೀಟಿ ಹೊಂದಿದ್ದಲ್ಲಿ, ನೀವು ಕುಟುಂಬ ವ್ಯವಸ್ಥೆಯಲ್ಲಿ ದಾಖಲಿಸಿಕೊಳ್ಳುವ ಅಗತ್ಯವಿಲ್ಲ. ನೀವು ಕೆಳಗೆ ನೀಡಿರುವ ಲಿಂಕ್‌ ಅಲ್ಲಿ ಆಧಾರ್‌ ಸಂಖ್ಯೆ ನೀಡಿ ಕುಟುಂಬ ಸಂಖ್ಯೆ ಪಡೆಯಬಹುದು.  https://kutumba.karnataka.gov.in/mykutumba/MISReport/KnowYourFamilyID

3. ಕುಟುಂಬ ವ್ಯವಸ್ಥೆಯಲ್ಲಿ ದಾಖಲಾಗಲು ಬೇಕಾಗುವ ಮಾಹಿತಿಗಳು :

      a.   ಕುಟುಂಬದ ಎಲ್ಲ ಸದಸ್ಯರ ಆಧಾರ್‌ ಸಂಖ್ಯೆ.

      b.   ಅರ್ಜಿದಾರನ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್‌ ಸಂಖ್ಯೆ. ದೃಢೀಕರಣಕ್ಕಾಗಿ ಇದೇ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ ಎಂಬುದನ್ನು ಗಮನಿಸಿ.

      c.   ಕುಟುಂಬದ ಇತರೆ ಸದಸ್ಯರು ಮೊಬೈಲ್‌ ಸಂಖ್ಯೆ ಹೊಂದಿದ್ದಲ್ಲಿ ದೃಢೀಕರಣಕ್ಕಾಗಿ ಸದರಿ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ ಎಂಬುದನ್ನು ಗಮನಿಸಿ.

      d.   ಸದಸ್ಯರ ಇ-ಮೇಲ್‌ ಐ.ಡಿ., ಲಭ್ಯವಿದ್ದಲ್ಲಿ. ದೃಢೀಕರಣಕ್ಕಾಗಿ ಓಟಿಪಿಯನ್ನು ಇ-ಮೇಲ್‌ಗೆ ಕಳುಹಿಸಲಾಗುತ್ತದೆ ಎಂಬುದನ್ನು ಗಮನಿಸಿ.

      e.   ಜನನ ಪ್ರಮಾಣ ಪತ್ರ / ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿರುವಂತೆ ಜನ್ಮ ದಿನಾಂಕ.

      f.    ಎಲ್ಲ ಸದಸ್ಯರ ವೈವಾಹಿಕ ಸ್ಥಿತಿ.

      g.  ಎಲ್ಲ ಸದಸ್ಯರ ವಿಳಾಸ.

      h.   ಎಲ್ಲ ಸದಸ್ಯರ ಪಾಲಕರ ಹೆಸರು ಮತ್ತು / ಸಂಗಾತಿಯ ಹೆಸರು.

      i.   ಕುಟುಂಬ ವ್ಯವಸ್ಥೆಯ ಮೂಲಕ ಸರ್ಕಾರದ ಎಲ್ಲ ಸಂವಹನಗಳಿಗಾಗಿ ಕುಟುಂಬದ ಒಬ್ಬ ವಯಸ್ಕ ಸದಸ್ಯನನ್ನು ಏಕ ಸಂಪರ್ಕ ವ್ಯಕ್ತಿಯನ್ನಾಗಿ ನೇಮಿಸುವುದು.

4. ಹೆಸರು, ಲಿಂಗ ಮತ್ತು ವಿಳಾಸವನ್ನು ಆಧಾರ್‌ನಲ್ಲಿದ್ದಂತೆ ನಮೂದಿಸುವುದು. ಒಂದು ವೇಳೆ ವಿವರಗಳಲ್ಲಿ ವ್ಯತ್ಯಾಸವಿದ್ದಲ್ಲಿ, ಅರ್ಜಿ ಸಲ್ಲಿಸುವ ಮುನ್ನ ಆಧಾರ್‌ನಲ್ಲಿ ವಿವರಗಳನ್ನು ಇಂದೀಕರಿಸುವುದು.

5. ಒಂದು ವೇಳೆ ಆಧಾರ್‌ನಲ್ಲಿರುವ ಜನ್ಮ ದಿನಾಂಕವು ಜನನ ಪ್ರಮಾಣ ಪತ್ರ / ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿದ್ದಂತೆ ಇಲ್ಲದಿದ್ದಲ್ಲಿ, ಜನ್ಮದಿನಾಂಕ ಬದಲಾಯಿಸಲು ಅವಕಾಶ ನೀಡಲಾಗುತ್ತದೆ. ನೀವು ಪೂರಕ ದಾಖಲೆಯನ್ನು ಲಗತ್ತಿಸಬೇಕಾಗುತ್ತದೆ ಅಥವಾ ಸ್ಥಳ ಪರಿಶೀಲನೆಯ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

6. ಕುಟುಂಬದ ಎಲ್ಲ ವಿವಾಹಿತ ಸದಸ್ಯರ ಎಲ್ಲ ಅವಿವಾಹಿತ ಮಕ್ಕಳನ್ನು ಸೇರಿಸುವುದು.

7. ಕುಟುಂಬದ ಜೀವಂತ ಸದಸ್ಯರನ್ನು ಮಾತ್ರ ಸೇರಿಸತಕ್ಕದ್ದು.

8. ನಿಮ್ಮ ಅರ್ಜಿಯನ್ನು ಸ್ಥಳ ಪರಿಶೀಲನೆಗಾಗಿ ಕಳುಹಿಸಲಾಗುತ್ತಿದೆ. ನೀವು ಗ್ರಾಮೀಣವಾಸಿಗಳಾಗಿದ್ದಲ್ಲಿ ನಿಮ್ಮ ವಿಳಾಸದ ವ್ಯಾಪ್ತಿಯ ಗ್ರಾಮಪಂಚಾಯತ್‌ ಗೆ ಅರ್ಜಿಯನ್ನು ಕಳುಹಿಸಲಾಗುವುದು ಅಥವಾ ನೀವು ನಗರವಾಸಿಗಳಾಗಿದ್ದರೆ, ನಗರ ಸ್ಥಳೀಯ ಸಂಸ್ಥೆಗೆ ಅರ್ಜಿಯನ್ನು ಕಳುಹಿಸಲಾಗುವುದು. ಆದ್ದರಿಂದ, ನಿಮ್ಮ ಗ್ರಾಮ ಪಂಚಾಯತ್‌ / ವಾರ್ಡ್‌ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ.

9. ಸಲ್ಲಿಸಿರುವ ಎಲ್ಲ ಮಾಹಿತಿಗಳು ಸರಿ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಮಾಹಿತಿಯ ಅಧಿಕೃತತೆಯನ್ನು ದೃಢೀಕರಿಸಿಕೊಂಡ ನಂತರವೇ ಸಲ್ಲಿಸಿ.

keyboard_arrow_up